EBM News Kannada
Leading News Portal in Kannada

‘ಆತನೊಂದು ಅದ್ಭುತ’: ತನ್ನ ನೆಚ್ಚಿನ ಕೋಚ್ ಹೆಸರಿಸಿದ ರೋಹಿತ್ ಶರ್ಮಾ

ಮುಂಬೈ, ಏಪ್ರಿಲ್ 4: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ (ಎಂಐ) ತಂಡದ್ದು. ರೋಹಿತ್ ಶರ್ಮಾ, ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಕೀರನ್ ಪೊಲಾರ್ಡ್, ಮಿಚೆಲ್ ಜಾನ್ಸನ್, ಲಸಿತ್ ಮಾಲಿಂಗ, ಜಸ್‌ಪ್ರೀತ್‌ ಬೂಮ್ರಾ ಇಂಥ ಬಹಳಷ್ಟು ಬಲಿಷ್ಠ ಆಟಗಾರರಿಂದ ಮುಂಬೈ ಒಟ್ಟಿಗೆ 4 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಂಕರಿಸಿದೆ.

ಸದ್ಯ ಮುಂಬೈ ಇಂಡಿಯನ್ಸ್ ನಾಯಕತ್ವ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೆಗಲ ಮೇಲಿದೆ. ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ರೋಹಿತ್ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.