EBM News Kannada
Leading News Portal in Kannada

ರಿಷಭ್ ಪಂತ್ ಫುಲ್ ರೋಸ್ಟ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ಮುಂಬೈ, ಏಪ್ರಿಲ್ 2: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಚೆನ್ನಾಗಿ ರೋಸ್ಟ್ ಮಾಡಿದ್ದಾರೆ. ಅತೀ ದೊಡ್ಡ ಸಿಕ್ಸ್ ಬಾರಿಸುವ ಚಾಲೆಂಜ್‌ಗೆ ಮುಂದಾದ ಪಂತ್‌ಗೆ ರೋಹಿತ್ ಸರಿಯಾಗೇ ಪ್ರತಿಕ್ರಿಯಿಸಿದ್ದಾರೆ. ಕೊರೊನಾವೈರಸ್‌ನಿಂದಾಗಿ ದೇಶದಾದ್ಯಂತ ಲಾಕ್‌ಡೌನ್ ವಿಧಿಸಲಾಗಿರುವುದರಿಂದ ಬೇಜಾರು ಕಳೆಯೋಕೆ ಬಹುತೇಕ ಮಂದಿ ಬೇರೆ ಬೇರೆ ರೀತಿಯ ಚಾಲೆಂಜ್‌ಗಳ ಮೊರೆ ಹೋಗಿದ್ದಾರೆ.

ಸಾಮಾನ್ಯ ಜನರು, ಪುಸ್ತಕ ಓದೋದು, ಮೊದಲ ಪರಿಚಯದ ಬಗ್ಗೆ ಫೇಸ್‌ಬುಕ್ಕಿನಲ್ಲಿ ಕಾಮೆಂಟ್‌ ಹಾಕೋದು, ಸೀರೆ-ಪಂಚೆ ಉಟ್ಟ ಫೋಟೋ ಶೇರ್ ಮಾಡೋದು, ತಮ್ಮ ಹಳೆಯ ಫೋಟೋಗಳನ್ನು ಹಾಕೋ ಚಾಲೆಂಜ್‌ಗಳಲ್ಲಿ ಖುಷಿ ಹುಡುಕುತ್ತಿದ್ದಾರೆ. ಇನ್ನು ಕೆಲವರು ಹುಡುಗೀರಲ್ಲಿ ರೇಶನ್ ಕಾರ್ಡ್ ಫೋಟೋವನ್ನು ಸ್ಟೇಟಸ್‌ಗೆ ಹಾಕುವಂತೆ ಚಾಲೆಂಜ್ ಎಸೆದು ತರಲೆ ಮಾಡುತ್ತಲೂ ಇದ್ದಾರೆ.