EBM News Kannada
Leading News Portal in Kannada

ಕ್ವಾರಂಟೈನ್​​ನಲ್ಲಿದ್ದ ರೈಲ್ವೆ ಉದ್ಯೋಗಿ ಆತ್ಮಹತ್ಯೆಗೆ ಶರಣು

ಉತ್ತರ ಪ್ರದೇಶ: ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಕ್ವಾರಂಟೈನ್​​ ನಲ್ಲಿದ್ದ 55 ವರ್ಷದ ರೈಲ್ವೆ ಉದ್ಯೋಗಿಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ತುಂಡ್ಲಾದ ಎಫ್ ಹೆಚ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕ್ವಾರಂಟೈನಲ್ಲಿ ಇಡಲಾಗಿತ್ತು. ವೈದ್ಯಕೀಯ ಕಾಲೇಜಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಎಸ್‌ಎಚ್‌ಒ ಜ್ಞಾನೇಂದ್ರ ಕುಮಾರ್ ತಿಳಿಸಿದ್ದಾರೆ.

ಅವರು ತುಂಡ್ಲಾದ ರೈಲ್ವೆ ಕಾಲೋನಿ ನಿವಾಸಿಯಾಗಿದ್ದರು. ಈತನ ಹಿರಿಯ ಸಹೋದ್ಯೋಗಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 20 ರಂದು ಕ್ವಾರಂಟೈನ್​​​ಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.