EBM News Kannada
Leading News Portal in Kannada

‘ನನ್ನ ಯಾರಾದ್ರೂ ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಕರೆದೊಯ್ಯಬಾರದಾ!’ – ಕಿವೀಸ್ ನಾಡಿಗೆ ಬಂತು ಡಿಮ್ಯಾಂಡ್

0

“ನ್ಯೂಜಿಲೆಂಡ್ ಅತ್ಯುತ್ತಮ ದೇಶ”…; “ಓ ಪ್ರಿಯ ಏಲಿಯನ್​ಗಳೇ, ನನ್ನನ್ನು ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಒಗೆಯಿರಿ ಬೇಗ. ನಮ್ಮ ಕೆಟ್ಟ ವ್ಯವಸ್ಥೆ ಸಾಕಾಗಿಹೋಗಿದೆ”…..; “ನ್ಯೂಜಿಲೆಂಡ್​ಗೆ ಹೋಗಿ ಸೇರಿಕೊಳ್ಳೋಣ ಎನಿಸುತ್ತಿದೆ” – ಹೀಗೆ ಸೋಷಿಯಲ್ ಮೀಡಿಯಾದಲ್ಲಿ ನ್ಯೂಜಿಲೆಂಡ್ ಬಗ್ಗೆ ಪುಂಖಾನುಪುಂಖವಾಗಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ, ಇಡೀ ಜಗತ್ತೆಲ್ಲಾ ಕೊರೊನಾದಿಂದಾಗಿ ಲಾಕ್ ಡೌನ್ ಆಗಿದ್ದರೆ, ನ್ಯೂಜಿಲೆಂಡ್ ಸಹಜ ಸ್ಥಿತಿಗೆ ಮರಳುತ್ತಿದೆ.

ನ್ಯೂಜಿಲೆಂಡ್​ನಲ್ಲಿ ಅಪಾಯಕಾರಿ ಮಟ್ಟಕ್ಕೆ ಸೋಂಕು ಹರಡುವ ಭೀತಿ ಇತ್ತು. ಆದರೆ, 28 ದಿನಗಳ ಕಾಲ ಕಠಿಣ ನಿರ್ಬಂಧಗಳೊಂದಿಗೆ ಲಾಕ್ ಡೌನ್ ಮಾಡಲಾಯಿತು. ಬಹಳ ಕಟ್ಟುನಿಟ್ಟಾಗಿ ಲಾಕ್ ಡೌನ್ ಅನುಷ್ಠಾನವಾಯಿತು. ಈಗ ದಿನಕ್ಕೆ ಒಂದಂಕಿ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಬರುತ್ತಿವೆ. ಆದ್ದರಿಂದ ನಾಲ್ಕನೇ ಹಂತದ ಲಾಕ್ ಡೌನ್ ನಿಯಮಗಳನ್ನು 3ನೇ ಹಂತಕ್ಕೆ ಇಳಿಸಲಾಗಿದೆ. ಅಂಗಡಿ-ಮುಂಗಟ್ಟುಗಳು, ಕಾರ್ಖಾನೆ, ಕಚೇರಿಗಳ ಕಾರ್ಯನಿರ್ವಹಣೆ ಶುರುವಾಗಿದೆ.

“ನಾವು ಬಹಳಷ್ಟು ಮಟ್ಟಿಗೆ ಕಡಿವಾಣ ಹಾಕಿದ್ದೇವೆ. ಕೆಲ ಬೆರಳೆಣಿಕೆಯಷ್ಟು ಪ್ರಕರಣಗಳು ತಲೆದೋರಬಹುದು. ಹಾಗಂತ ನಾವು ವಿಫಲವಾದೆವು ಅಂತ ಅಲ್ಲ. ಅಂಥ ಪ್ರಕರಣಗಳನ್ನ ನಾವು ಬಹಳ ಆಕ್ರಮಣಕಾರಿ ರೀತಿಯಲ್ಲಿ ನಿರ್ವಹಿಸುವ ಸ್ಥಿತಿಯಲ್ಲಿದ್ದೇವೆ ಎಂದರ್ಥ. ಈ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸುತ್ತಾ ಕೊನೆಗೆ ಮೂಲೋತ್ಪಾಟನೆ ಮಾಡಬಲ್ಲೆವು” ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆನ್ ಹೇಳಿಕೊಂಡಿದ್ಧಾರೆ.

Leave A Reply

Your email address will not be published.