EBM News Kannada
Leading News Portal in Kannada

ದೇಶದಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ: ಸೋಂಕು ಹರಡುವಿಕೆ ಪ್ರಮಾಣ ಶೇ.100ರಿಂದ ಶೇ.6ಕ್ಕೆ ದಿಢೀರ್​​ ಇಳಿಕೆ

ನವದೆಹಲಿ(ಏ.25): ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ಎರಡನೇ ಅವಧಿಗೆ ಜಾರಿ ಮಾಡಲಾದ ಲಾಕ್​​ಡೌನ್​​ ಪರಿಣಾಮದಿಂದ ಕಡೆಗೂ ಕೊರೋನಾ ವೈರಸ್​​ ದೇಶದಲ್ಲಿ ನಿಯಂತ್ರಣಕ್ಕೆ ಬಂದಿದೆ. ಹಾಗಾಗಿಯೇ ಇತ್ತೀಚೆಗೆ ಕೋವಿಡ್​​-19 ಪ್ರಕರಣಗಳು ಹೆಚ್ಚುಗುತ್ತಿವ ಎಂಬ ಕಾಣಿಸಿದರೂ ಸೋಂಕಿತರ ಸಂಖ್ಯೆ ಮಾತ್ರ ದಿಢೀರ್​​ ಏರಿಕೆಯಾಗುತ್ತಿಲ್ಲ. ಇದರರ್ಥ ಕೊರೋನಾ ಪ್ರಮಾಣವೂ ದೇಶಾದ್ಯಂತ ಇಳಿಕೆಯಾಗುತ್ತಿರುವ ಮುನ್ಸೂಚನೆ ನೀಡಿದಂತಿದೆ.

ಹೌದು, ಮಾರ್ಚ್​​ 23ರಿಂದ ಏಪ್ರಿಲ್​​​ 23ರವರೆಗೂ ಸುಮಾರು 5 ಲಕ್ಷ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ಪರಿಣಾಮ ಒಂದು ತಿಂಗಳ ಅವಧಿಯಲ್ಲಿ ಸೋಂಕಿತರ ಪತ್ತೆ ಪ್ರಮಾಣ ಜಾಸ್ತಿ ಇತ್ತು. ಆದರೀಗ ಕೊರೋನಾ ಪರೀಕ್ಷೆ ಪ್ರಮಾಣ ಇದರ 33 ಪಟ್ಟು ಹೆಚ್ಚಿಸಲಾಗಿದೆ. ಹೀಗಿದ್ದರೂ ಕೊರೋನಾ ಹರಡುವಿಕೆ ಪ್ರಮಾಣ ಶೇ.6ರಷ್ಟು ಮಾತ್ರ ಇದೆ. ಈ ಮೂಲಕ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ.

ಪ್ರತಿದಿನ ಶೇ.100ರ ಗಡಿ ದಾಟುತ್ತಿದ್ದ ಕೊರೋನಾ ಸೋಂಕು ಈಗ ದಿಢೀರ್​ ನಿನ್ನೆ ಮಾತ್ರ ಶೇ.6ಕ್ಕೆ ಇಳಿಕೆಯಾಗಿದೆ. ಇದರರ್ಥ ದೇಶದಲ್ಲಿ ಕೊರೋನಾ ವೈರಸ್‌ ಹರಡುವ ವೇಗ ಕಡಿಮೆಯಾಗಿದೆ ಎಂದು. ಇನ್ನು ಮುಂದೆಯೂ ಲಾಕ್‌ಡೌನ್‌ ಮುಗಿದ ನಂತರ ಇನ್ನಷ್ಟು ಕಡಿಮೆಯಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನೊಂದೆಡೆ ಮಳೆಗಾಲ ಆರಂಭವಾದ ನಂತರ ಮತ್ತೆ ವೈರಸ್ಸಿನ ಎರಡನೇ ಅಲೆ ಕಾಣಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕಾರಣಕ್ಕಾದರೂ ಕಡ್ಡಾಯವಾಗಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಲಾಕ್​​ಡೌನ್​​ ಆದೇಶ ಕಟ್ಟುನಿಟ್ಟಿನಿಂದ ಪಾಲಿಸಬೇಕಾಗಿದೆ.