EBM News Kannada
Leading News Portal in Kannada

ಭಾರತಕ್ಕೆ ಹಸ್ತಾಂತರ ವಿರೋಧಿಸಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬ್ರಿಟನ್ ಕೋರ್ಟ್

0

ನವದೆಹಲಿ(ಏ. 20): ವಿಜಯ್ ಮಲ್ಯ ಅವರಿಗೆ ಹಿನ್ನಡೆಯಾಗಿದೆ. ಭಾರತಕ್ಕೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸಿಕೊಳ್ಳುವ ವಿಜಯ ಮಲ್ಯ ಅವರ ಪ್ರಯತ್ನ ವಿಫಲವಾಗಿದೆ. ಮಲ್ಯ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಬ್ರಿಟನ್​ನ ಹೈಕೋರ್ಟ್ ಇಂದು ಸೋಮವಾರ ತಿರಸ್ಕರಿಸಿದೆ. ಲಂಡನ್​ನ ರಾಯಲ್ ಕೋರ್ಟ್​ನ ಎರಡು ಸದಸ್ಯರ ನ್ಯಾಯಪೀಠವು ಈ ತೀರ್ಪು ನೀಡಿದೆ.

ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ ಸಾಲ ಪಡೆದು ವಾಪಸ್ ಮಾಡದೇ ಈಗ ಬ್ರಿಟನ್​ಗೆ ಹೋಗಿ ನೆಲಸಿರುವ ವಿಜಯ್ ಮಲ್ಯ ಅವರನ್ನು ತಮ್ಮ ವಶಕ್ಕೆ ಕೊಡುವಂತೆ ಭಾರತ ಸರ್ಕಾರ ಮನವಿ ಮಾಡಿಕೊಂಡಿದೆ. ಭಾರತದ ಈ ಪ್ರಯತ್ನವನ್ನು ವಿರೋಧಿಸಿ ವಿಜಯ್ ಮಲ್ಯ ಅವರು ಲಂಡನ್​ನ ಈ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ, ತಮ್ಮನ್ನು ಭಾರತಕ್ಕೆ ಒಪ್ಪಿಸಬಾರದೆಂದು ಕೇಳಿಕೊಂಡಿದ್ದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಲಾರ್ಡ್ ಜಸ್ಟಿಸ್ ಸ್ಟೀಫನ್ ಇರ್ವಿನ್ ಮತ್ತು ಜಸ್ಟಿಸ್ ಎಲಿಸಬೆತ್ ಲಾಯಿಂಗ್ ಅವರು ತೀರ್ಪು ನೀಡಿದರು. ವಿಜಯ್ ಮಲ್ಯ ವಿರುದ್ಧ ಸಾಕ್ಷ್ಯಾಧಾರ ಬಲವಾಗಿದೆ. ಭಾರತ ಮಾಡಿರುವ ಆರೋಪಗಳಿಗೆ ಸಕಾರಣಗಳಿದ್ದಂತಿದೆ ಎಂದು ತಮ್ಮ ತೀರ್ಪಿನ ವೇಳೆ ನ್ಯಾಯಮೂರ್ತಿಗಳು ಹೇಳಿದರು.

ಇದರೊಂದಿಗೆ ವಿಜಯ್ ಮಲ್ಯ ಅವರು ಭಾರತ ಸರ್ಕಾರದ ವಶವಾಗುವ ದಿನ ಸನ್ನಿಹಿತವಾಗಿದೆ. ಕೊರೋನಾ ವೈರಸ್ ಬಿಕ್ಕಟ್ಟು ಮುಗಿದ ಬಳಿಕ ಅವರ ಹಸ್ತಾಂತರ ಪ್ರಕ್ರಿಯೆ ಶುರುವಾಗಬಹುದು.

ವಿಜಯ್ ಮಲ್ಯ ಅವರ ಈ 9 ಸಾವಿರ ಕೋಟಿ ರೂ ಹಗರಣದ ತನಿಖೆಯನ್ನ ಸಿಬಿಐ ಮತ್ತು ಇಡಿ ಸಂಸ್ಥೆಗಳು ನಡೆಸುತ್ತಿವೆ. ಮಲ್ಯ ತಮ್ಮ ಹಣವನ್ನು ವಾಪಸ್ ಮಾಡುತ್ತೇನೆಂದು ಆಗಾಗ್ಗೆ ಮನವಿ ಮಾಡಿಕೊಳ್ಳುತ್ತಲೇ ಇದ್ಧಾರೆ. ಅದರೆ, ಕೇಂದ್ರ ತನಿಖಾ ಸಂಸ್ಥೆಗಳು ಮಲ್ಯರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಯೋಜಿಸಿವೆ.

Leave A Reply

Your email address will not be published.