EBM News Kannada
Leading News Portal in Kannada

ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿ ಆರಂಭಿಸಲು ವೆಬ್​ ಪೋರ್ಟಲ್​ ಲಾಂಚ್​ ಮಾಡಿದ ಎಚ್​ಆರ್​ಡಿ

ನವದೆಹಲಿ(ಏ.12): ದೇಶದಲ್ಲಿ ಲಾಕ್​ಡೌನ್​ ಜಾರಿ ಇರುವ ಹಿನ್ನೆಲೆ, ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಚಿಂತನೆ ನಡೆಸಿದೆ.

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸಚಿವಾಲಯವು, ಅಭ್ಯಾಸ ಪರಿಕರಗಳ(ಸ್ಟಡಿ ಮೆಟೀರಿಯಲ್) ಜೊತೆಗೆ ವೆಬ್​ ಪೋರ್ಟಲ್​ನ್ನು ಬಿಡುಗಡೆ ಮಾಡುತ್ತಿದೆ. ಇ-ಲರ್ನಿಂಗ್(ಇ-ಕಲಿಕೆ) ಮೂಲಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ.

ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಚರ್ಚೆ ನಡೆಸುವಾಗ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿ ಪ್ರಾರಂಭಿಸುವ ಚಿಂತನೆ ಬಂದಿತು. ಸಚಿವಾಲಯವು ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶಾದ್ಯಂತ ಮಾರ್ಚ್​ 25ರಂದು ಲಾಕ್​ಡೌನ್ ಜಾರಿಯಾಗಿದೆ. ಹೀಗಾಗಿ ಸಚಿವಾಲಯವು ವಿದ್ಯಾರ್ಥಿಗಳಿಗೆ ತನ್ನದೇಯಾದ ಇ-ಪಾಠಶಾಲಾ ಎಂಬ ವೆಬ್​ ಪೋರ್ಟಲ್​ ಆರಂಭಿಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಜ್ಯಗಳ ಜೊತೆ ಚರ್ಚೆ ನಡೆಸಲು ಚಿಂತನೆ ನಡೆಸಿದೆ. ಅಂದರೆ ಶೈಕ್ಷಣಿಕ ಕ್ಯಾಲೆಂಡರ್, ಪರೀಕ್ಷೆ ತಡೆ ಬಗ್ಗೆ ಚರ್ಚಿಸಲಾಗುತ್ತದೆ. ರಾಜ್ಯಗಳ ಜೊತೆ ಚರ್ಚೆ ನಡೆಸುವುದು ಬಹಳ ಮುಖ್ಯವಾಗಿದೆ ಹೀಗಾಗಿ ಸಚಿವಾಲಯವು ಈ ಬಗ್ಗೆ ಪ್ಲ್ಯಾನ್ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವರು ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಜೊತೆ ಸಂವಾದ ನಡೆಸಲಿದ್ದಾರೆ.