ಲಾಕ್‌ಡೌನ್ ನಂತರವೂ ಮದ್ಯ ಪ್ರಿಯರಿಗಿಲ್ಲ ಸಿಹಿ ಸುದ್ದಿ; ಎಣ್ಣೆ ಅಂಗಡಿಗಳು ತೆರೆಯೋದು ಬಹುತೇಕ ಡೌಟು
ಕೋಲಾರ (ಏಪ್ರಿಲ್. 11); ಮಧ್ಯ ಮಾರಾಟ ಮಾಡಲು ನಾನು ಸರ್ಕಾರಕ್ಕೆ ಶಿಪಾರಸು ಮಾಡಿಲ್ಲ. ಜನರ ಪ್ರಾಣಕ್ಕಿಂತ ಮಧ್ಯ ಮಾರಾಟ ಮುಖ್ಯವಲ್ಲ. ಹೀಗಾಗಿ ಕುಡಿಲೇಬೇಕೆಂದು ಸ್ನೇಹಿತರು ಹಠ ಹಿಡಿಯಬಾರದು ಎಂದು ಹೇಳುವ ಮೂಲಕ ಅಬಕಾರಿ ಸಚಿವ ಹೆಚ್. ನಾಗೇಶ್ ಏಪ್ರಿಲ್.14 ರ ನಂತರವೂ ಮದ್ಯದ ಅಂಗಡಿಗಳು ತೆರೆಯುವುದು ಅಸಾಧ್ಯ ಎಂಬ ಸೂಚನೆಯನ್ನು ನೀಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಮದ್ಯದ ಅಂಗಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸುಮಾರು 7 ಜನ ಮದ್ಯ ಪ್ರಿಯರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಹೀಗಾಗಿ ಮದ್ಯಕ್ಕೆ ದಾಸರಾಗಿರುವವರು ಲಾಕ್‌ಡೌನ್ ಮುಗಿದು ಏಪ್ರಿಲ್.14ರ ನಂತರ ಮದ್ಯದ ಅಂಗಡಿಗಳು ತೆರೆಯುತ್ತಾರೆ ಎಂದು ಕಾಯುತ್ತಿದ್ದಾರೆ.
ಆದರೆ, ಇಂದು ಈ ಕುರಿತು ಕೋಲಾರದಲ್ಲಿ ಮಾತನಾಡಿರುವ ಅಬಕಾರಿ ಸಚಿವ ಹೆಚ್. ನಾಗೇಶ್, “ಲಾಕ್ ಡೌನ್ ಆದೇಶವನ್ನು ನನ್ನ ಸ್ನೇಹಿತ ಮಧ್ಯಪಾನಿಗಳು ಬೆಂಬಲಿಸಬೇಕು. ನೂರಕ್ಕೆ ನೂರು ಲಾಕ್ ಡೌನ್ ಮುಂದುವರೆಯಬೇಕು. ದಿನೇ ದಿನೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಎಣ್ಣೆ ಅಂಗಡಿಗಳನ್ನು ಸದ್ಯ್ಕಕೆ ತೆರೆಯುವ ಯಾವುದೇ ಶಿಫಾರಸನ್ನು ನಾನು ಸರ್ಕಾರಕ್ಕೆ ನೀಡಿಲ್ಲ” ಎಂದು ಅವರು ತಿಳಿಸಿದ್ದಾರೆ.
“ಮಧ್ಯಪಾನಿಗಳು ಕೌನ್ಸಿಲಿಂಗ್ ಪಡೆಯೊದು ಸೂಕ್ತ. ಏಕೆಂದರೆ ಏಪ್ರಿಲ್.14 ಲಾಕ್‌ಡೌನ್ ಮುಗಿದ ನಂತರವೂ ಮದ್ಯದ ಅಂಗಡಿಗಳು ತೆರೆಯುವುದು ಖಚಿತ ಇಲ್ಲ. ಈ ಕುರಿತು ಲಾಕ್‌ಡೌನ್ ಅವಧಿ ಮುಗಿದ ನಂತರ ಸಿಎಂ ಜೊತೆ ಚರ್ಚೆ ನಡೆಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಮಾಹಿತಿ ನೀಡಿದ್ದಾರೆ.