EBM News Kannada
Leading News Portal in Kannada

ಕೊರೊನಾ ಭೀತಿ ನಡುವೆ ಮೌಲಾನಾ ಸಾದ್ ಆಡಿದ್ದು ಅದೆಂಥ ಮಾತು?

ನವದೆಹಲಿ, ಏಪ್ರಿಲ್ 2: ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ತಬ್ಲಿಘಿ-ಇ-ಜಮಾತ್ ನಡೆಸಿದ ಧಾರ್ಮಿಕ ಸಮಾವೇಶವೊಂದು ದೇಶದ ಹಲವು ರಾಜ್ಯಗಳಿಗೆ ಕೊರೊನಾ ವೈರಸ್ ಸೋಂಕು ಹರಡಲು ಕಾರಣವಾಗಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶ ಅಲಾಮಿ ಮಾರ್ಕಾಜ್ ಬಂಗ್ಲೆವಾಲಿ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವು ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ನೂರಾರು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.

ಈ ನಡುವೆ ಮೌಲಾನಾ ಮೊಹಮ್ಮದ್ ಸಾದ್ ರವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೊಂದು ಲೀಕ್ ಆಗಿದೆ. ಈ ಆಡಿಯೋ ಕ್ಲಿಪ್ ನ ಸತ್ಯಾಸತ್ಯತೆ ಬಗ್ಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

”ನಾವೆಲ್ಲರೂ ಮಸೀದಿಯಲ್ಲಿದ್ದರೆ, ಜಗತ್ತಿನಲ್ಲಿ ಅಲ್ಲಾಹು ಶಾಂತಿ ಸೃಷ್ಟಿಸುತ್ತಾನೆ. ಸರ್ಕಾರದ ಆದೇಶಗಳನ್ನು ಪಾಲಿಸಬೇಡಿ. ಮಸೀದಿಯಲ್ಲಿರಿ.. ಸಾಯುವ ಪರಿಸ್ಥಿತಿ ಉಂಟಾದರೆ, ಸಾವನ್ನಪ್ಪಲು ಮಸೀದಿಗಿಂತ ಉತ್ತಮ ಜಾಗ ಬೇರೊಂದಿಲ್ಲ” ಎಂದು ತನ್ನ ಅನುಯಾಯಿಗಳಿಗೆ ಮೌಲಾನಾ ಸಾದ್ ಹೇಳಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಲೀಕ್ ಆಗಿದೆ.

”ಈ ಸಂದರ್ಭದಲ್ಲಿ ಮಸೀದಿಗೆ ಹೋಗಬೇಡಿ ಮತ್ತು ಪ್ರಾರ್ಥನೆ ಮಾಡಬೇಡಿ ಅಂತ ಹೇಳುವವರ ಬಗ್ಗೆ ನನಗೆ ಬೇಸರ ಉಂಟಾಗುತ್ತದೆ. ಯಾಕಂದ್ರೆ, ನಾವೆಲ್ಲರೂ ಮಸೀದಿಯಲ್ಲಿದ್ದು, ಪ್ರಾರ್ಥನೆ ಮಾಡಬೇಕಾದ ಸಮಯ ಇದು. ಹೀಗೆ ಮಾಡುವುದರಿಂದ ಅಲ್ಲಾಹು ಜಗತ್ತಿನಲ್ಲಿ ಶಾಂತಿ ಸೃಷ್ಟಿಸುತ್ತಾನೆ” ಅಂತ ಮೌಲಾನಾ ಸಾದ್ ಹೇಳಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದೆ.

”ಸರ್ಕಾರ ಅಥವಾ ವೈದ್ಯಕೀಯ ಮಾರ್ಗಸೂಚಿಗಳನ್ನು ಪಾಲಿಸಬೇಡಿ. ಸಾಯಲು ಮಸೀದಿಗಿಂತ ಉತ್ತಮ ಜಾಗ ಮತ್ತೊಂದಿಲ್ಲ” ಅಂತ ಆಡಿಯೋದಲ್ಲಿ ಮೌಲಾನಾ ಸಾದ್ ಹೇಳಿದ್ದಾರೆ ಎಂದು ವರದಿ ಆಗಿದೆ. ಮೌಲಾನಾ ಸಾದ್ ಹೀಗೆ ಭಾಷಣ ಮಾಡುವಾಗ, ನಿಜಾಮುದ್ದೀನ್ ಮಾರ್ಕಾಜ್ ನಲ್ಲಿ ಸಾವಿರಾರು ಮಂದಿ ನೆರೆದಿದ್ದರು ಎನ್ನಲಾಗಿದೆ. ಈ ಆಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.