EBM News Kannada
Leading News Portal in Kannada

ಕೇರಳ:ಕೋಜಿಕ್ಕೋಡ್ ನಲ್ಲಿ ಭಾರೀ ಮಳೆ, ಭೂ ಕುಸಿತ; 9 ಮಂದಿ ನಾಪತ್ತೆ, ಮಗು ಸಾವು

ಕೋಜಿಕ್ಕೋಡ್: ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, 9 ವರ್ಷದ ಮಗು ಮೃತಪಟ್ಟಿದ್ದು 9 ಮಂದಿ ನಾಪತ್ತೆಯಾಗಿದ್ದಾರೆ.

ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆಗಳು ಕೊಚ್ಚಿಹೋಗಿದ್ದು, ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಹಲವು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತ ವಾಗಿದೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಮರೆಸ್ಸರಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.

ಮನೆಗಳು ಕೊಚ್ಚಿಹೋಗಿದ್ದು, ಕೃಷಿ ಭೂಮಿ ಮತ್ತು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಬೆಟ್ಟ ಪ್ರದೇಶದಲ್ಲಿದ್ದ ಅಬ್ದುಲ್ ಸಲೀನ್ ಎಂಬುವರ ಮಗಳು ದಿಲ್ನಾ ಭೂ ಕುಸಿತಕ್ಕೆ ಬಲಿಯಾಗಿದ್ದಾಳೆ.

ಕರಿನ್ ಚೋಳ ಗ್ರಾಮದಿಂದ 9 ಮಂದಿ ನಾಪತ್ತೆಯಾಗಿದ್ದಾರೆ, ಭೂ ಕುಸಿತದ ನಂತರ ಇವರು ನಾಪತ್ತಯಾಗಿದ್ದರೆಂದು ಹೇಳಲಾಗಿದೆ,ಇನ್ನೂ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ದಳ ಕೋಜಿಕ್ಕೋಡ್ ಗೆ ಆಗಮಿಸಿದೆ.