EBM News Kannada
Leading News Portal in Kannada

14 ವರ್ಷದ ಅಶ್ಲೀಲ ಚಿತ್ರ ವ್ಯಸನಿಯಿಂದ ತನ್ನ ಸ್ವಂತ ಅಕ್ಕನ ಮೇಲೆ ಅತ್ಯಾಚಾರ, ಗರ್ಭಿಣಿ

ನವಿ ಮುಂಬೈ: ಅಶ್ಲೀಲ ಚಿತ್ರಗಳ ವ್ಯಸನಿಯಾಗಿದ್ದ 14 ವರ್ಷದ ಬಾಲಕ ತನ್ನ ಅಪ್ರಾಪ್ತ ಅಕ್ಕನ ಮೇಲೆ ಅತ್ಯಾಚಾರ ನಡೆಸಿದ್ದು ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ.
ಭಿವಂಡಿಯ ಕಮೊತೇ ಗ್ರಾಮದ 14 ವರ್ಷದ ಬಾಲಕ ತನ್ನ ಮೊಬೈಲ್ ನಲ್ಲಿ ನಿರಂತರವಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳುವ ಸಲುವಾಗಿ ತನ್ನ ಸ್ವಂತ ಅಕ್ಕನ ಮೇಲೆ ವಿಕೃತಿ ಮೆರೆದಿದ್ದಾನೆ.

ಜೂನ್ 6ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅತ್ಯಾಚಾರ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಪೋಷಕರಿಗೆ ತಮ್ಮ ಮಗಳು ಎರಡು ತಿಂಗಳ ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದಾರೆ.

ಅಪ್ರಾಪ್ತೆಯನ್ನು ಪೊಲೀಸರು ತನಿಖೆಗೆ ಒಳಪಡಿಸಿದಾಗ ಆಕೆ ತನ್ನ ತಮ್ಮ ಎರಡು ತಿಂಗಳಿನಿಂದ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ.