EBM News Kannada
Leading News Portal in Kannada

ನಿಫಾ ವೈರಸ್ ಸಂಪೂರ್ಣ ನಿಯಂತ್ರಣದಲ್ಲಿದೆ; ಕೇರಳ ಆರೋಗ್ಯ ಸಚಿವೆ

ತಿರುವನಂತಪುರ: ದೇಶದಾದ್ಯಂತ ಭಾರೀ ಆತಂಕವನ್ನು ಸೃಷ್ಟಿಸಿದ್ದ ನಿಫಾ ವೈರಸ್ ಪ್ರಸ್ತುತ ನಿಯಂತ್ರಣದಲ್ಲಿದೆ, ಹೊಸದಾಗಿ ವೈರಸ್ ತಗಲುವ ಸಾಧ್ಯತೆಗಳು ತೀರಾ ಕಡಿಮೆಯಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮೇ.31ರ ಬಳಿಕ ನಿಫಾ ವೈರಸ್ ತಗುಲಿದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದೆ ಎಂಬುದಾಗಿ ಹೇಳಬಹುದು. ಆದರೆ, ಜು.30ರವರೆಗೆ ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

45 ದಿನಗಳ ಕಾಲಾವಧಿ ಅಗತ್ಯವಾಗಿದ್ದು, ಇದು ಕೇವಲ ಸುರಕ್ಷತೆ ವಿಧಾನವಷ್ಟೇ. ಯಾವುದೇ ಹೊಸ ಪ್ರಕರಣಗಳು ಇನ್ನು ಮುಂದೆ ದಾಖಲಾಗದು ಎಂಬ ದೃಢ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ನಿಫಾ ವೈರಸ್ ಬಗೆಗಿನ ಆತಂಕ ಹೋಗಲಾಡಿಸಲು ಶ್ರಮಿಸಿದ ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಸಹಕಾರ ನೀಡಿದ ವಿರೋಧ ಪಕ್ಷಗಳನ್ನು ಇದೇ ವೇಳೆ ಸಚಿವೆ ಶೈಲಜಾ ಅವರು ಅಭಿನಂದಿಸಿದ್ದಾರೆ.