ಎಸ್ಸಿ-ಎಸ್ಟಿ ಸಮುದಾಯಗಳ ನೌಕರರ ಬಡ್ತಿ ಮಸೂದೆಗೆ ರಾಷ್ಟ್ರಪತಿ ಅಂಕಿತ
ಬೆಂಗಳೂರು: ರಾಜ್ಯದ ಆಡಳಿತದಲ್ಲಿ ಮತ್ತೆ ಪುನರ್ರಚನೆಗೆ ದಾರಿ ಮಾಡಿಕೊಡುವ ವಿದ್ಯಾಮಾನವೊಂದರಲ್ಲಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಬಡ್ತಿ ಮಸೂದೆಗೆ ಸಹಿ ಹಾಕಿದ್ದಾರೆ.
ಇದನ್ನು ಕರ್ನಾಟಕ ಸರ್ಕಾರಿ ಸೇವಕರಿಗೆ ಪರಿಣಾಮಕಾರಿ ಹಿರಿಯತನ ವಿಸ್ತರಣೆ, ಮೀಸಲಾತಿ ಆಧಾರದ ಮೇಲಿನ ರಾಜ್ಯದ ನಾಗರಿಕ ಸೇವೆಗಳ ಹುದ್ದೆಗೆ) ಮಸೂದೆ, 2017 ಎಂದು ಕರೆಯಲಾಗುತ್ತದೆ.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಸಾವಿರಾರು ಎಸ್ಸಿ/ಎಸ್ಟಿ ವರ್ಗಗಳ ಅಧಿಕಾರಿಗಳಿಗೆ ಹಿಂಬಡ್ತಿ ನೀಡಿ, ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ನೌಕರರು ಮತ್ತು ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ನೀಡಿದ ಕೆಲವೇ ವಾರಗಳಲ್ಲಿ ರಾಷ್ಟ್ರಪತಿಗಳು ಈ ಮಸೂದೆಗೆ ಅಂಕಿತ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ಬಡ್ತಿ ಅಥವಾ ಪದೋನ್ನತಿಯಲ್ಲಿ ಮೀಸಲಾತಿಯನ್ನು ತೆಗೆದುಹಾಕಿತ್ತು.
ಈ ಬೆಳವಣಿಗೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮತ್ತು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ತೋರಿಸಿದ ಕಾಳಜಿಗೆ ಸಿಕ್ಕಿರುವ ಗೆಲುವು ಎಂದು ಪರಮೇಶ್ವರ್ ಬಣ್ಣಿಸಿದ್ದಾರೆ.