EBM News Kannada
Leading News Portal in Kannada

ಉತ್ತರ ಕೊರಿಯಾದ ಶೃಂಗಸಭೆಯನ್ನು ರದ್ದುಗೊಳಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ ಟನ್: ಜೂ.12 ಕ್ಕೆ ನಿಗದಿಯಾಗಿದ್ದ ಉತ್ತರ ಕೊರಿಯಾದ ಶೃಂಗಸಭೆಯಲ್ಲಿ ಭಾಗವಹಿಸುವುದರಿಂದ ಡೊನಾಲ್ಡ್ ಟ್ರಂಪ್ ಹಿಂದೆಸರಿದಿದ್ದಾರೆ.
ಉತ್ತರ ಕೊರಿಯಾ ಇತ್ತೀಚೆಗೆ ನೀಡಿದ್ದ ಹೇಳಿಕೆಯಲ್ಲಿ ಹಗೆತನ ಹಾಗೂ ಕೋಪವನ್ನು ಕಾರಣವನ್ನಾಗಿ ನೀಡಿರುವ ಡೊನಾಲ್ಡ್ ಟ್ರಂಪ್ ಶೃಂಗಸಭೆಯನ್ನು ರದ್ದುಗೊಳಿಸಿದ್ದಾರೆ. ಶ್ವೇತ ಭವನದಿಂದ ಬಿಡುಗಡೆಯಾಗಿರುವ ಅಧಿಕೃತ ಪತ್ರದಲ್ಲಿ ಡೊನಾಲ್ಡ್ ಟ್ರಂಪ್ ಶೃಂಗಸಭೆಗೆ ಭಾಗಿಯಾಗದೇ ಇರುವುದನ್ನು ಸ್ಪಷ್ಟಪಡಿಸಲಾಗಿದೆ.
ಉತ್ತರ ಕೊರಿಯಾ ಅವರ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಮಾತನಾಡುತ್ತದೆ. ನಮ್ಮ ಬಳಿಯೂ ಅಣ್ವಸ್ತ್ರಗಳಿವೆ, ಆದರೆ  ಅವುಗಳು ಬಳಕೆಯಾಗದಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.