EBM News Kannada
Leading News Portal in Kannada

ಕೊಲೆ ಪ್ರಕರಣದಲ್ಲಿ 17 ವರ್ಷ ಜೈಲಿನಲ್ಲಿದ್ದ ಅಮೀರ್​ ಖಾನ್​ಗೆ ಕೊನೆಗೂ ಸಿಕ್ಕಿತು ಮುಕ್ತಿ!

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅಮೀರ್​ ಖಾನ್​ಗೆ ಕೊನೆಗೂ ಮುಕ್ತಿ ಸಿಕ್ಕಿದೆ. 17 ವರ್ಷದ ಕೇಸ್​ನಿಂದ ಅಮೀರ್​ ಖಾನ್​ ಹೊರ ಬಂದಿದ್ದಾರೆ. ಹಾಗಿದ್ದರೆ ಅಮೀರ್​ ಖಾನ್​ ಯಾವಾಗ ಕೊಲೆ ಕೇಸ್​ನಲ್ಲಿ ಸಿಲುಕಿಕೊಂಡಿದ್ದರು? ಈ ವಿಚಾರ ಇಷ್ಟರವರೆಗೆ ಬೆಳಕಿಗೆ ಯಾಕೆ ಬಂದಿಲ್ಲಾ? ಎಂಬ ಪ್ರಶ್ನೆಗಳು ಮೂಡಿರಬಹುದು. ಹಾಗಂತ ಕನ್ಪ್ಯೂಸ್​ ಆಗ್ಬೇಡಿ..ಇದು ಬಾಲಿವುಡ್​ ನಟ ಅಮೀರ್​ ಖಾನ್​ ಅಲ್ಲ, ಪಾಕಿಸ್ತಾನದ ಎಂಕ್ಯೂಎಂ ನಾಯಕ ಅಮೀರ್​ ಖಾನ್​!. ಪಾಕಿಸ್ತಾನ ಮಾಧ್ಯವೊಂದು ಈ ಸುದ್ದಿಗೆ ಬಾಲಿವುಡ್​ ನಟ ಅಮೀರ್​​​ ಖಾನ್​ನ ಫೋಟೋ ಬಳಸಿ ಎಡವಟ್ಟು ಮಾಡಿಕೊಂಡಿದೆ.

ಪಾಕಿಸ್ತಾನದಲ್ಲಿ ಅಮೀರ್​ ಖಾನ್​ ಎಂಬವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. 17 ವರ್ಷಗಳ ನಂತರ ಅವರ ಬಿಡುಗಡೆಯಾಗುತ್ತದೆ. ಈ ವಿಚಾರವನ್ನು ಪ್ರಸಾರ ಮಾಡುವ ಸಂದರ್ಭದಲ್ಲಿ ಬಾಲಿವುಡ್​ ನಟ ಅಮೀರ್​ ಖಾನ್​ ಫೋಟೋ ಹಾಕಿ ಅಲ್ಲಿನ ಮಾಧ್ಯಮವೊಂದು ಸುದ್ದಿ ಪ್ರಸಾರ ಮಾಡಿದ್ದು, ಬಳಿಕ ಕ್ಷಮಾಪಣೆ ಕೇಳಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಫೋಟೋ ವೈರಲ್​ ಆಗಿದೆ.

ಪಾಕ್​ ಪತ್ರಕರ್ತೆ ನೈಲಾ ಇನಾಯತ್​​ ಎಂಬಾಕೆ ಈ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. 17 ವರ್ಷದ ನಂತರ ಎಂಕ್ಯೂಎಂ ನಾಯಕ ಅಮೀರ್​ ಖಾನ್​ ಕೊಲೆ ಪ್ರಕರಣದಿಂದ ಹೊರಬಂದಿದ್ದಾರೆ. ಭಾರತೀಯ ನಟ ಅಮೀರ್​ ಖಾನ್​ 17 ವರ್ಷ ಪಾಕಿಸ್ತಾನದಲ್ಲಿದ್ದರು ಎಂದು ತಿಳಿದಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.