EBM News Kannada
Leading News Portal in Kannada

ರಜನಿಕಾಂತ್ ಚಿತ್ರಕ್ಕಾಗಿ ಮುಂಗಡವಾಗಿ ಪಡೆದ ಪೂರ್ತಿ ಹಣವನ್ನ ದೇಣಿಗೆ ನೀಡಿದ ರಾಘವ

ಕಾಲಿವುಡ್ ನಟ, ಡ್ಯಾನ್ಸರ್, ನಿರ್ದೇಶಕ ರಾಘವ ಲಾರೆನ್ಸ್ ಗೊತ್ತಲ್ವಾ?. ಅದೇ ಕಾಂಚನಾ ಚಿತ್ರ ಸರಣಿಗಳ ಮೂಲಕ ಭಯದೊಂದಿಗೆ ಜನರನ್ನು ನಗೆಗಡಲಲ್ಲಿ ತೇಲಿಸಿದ ನಟ. ಇನ್ನೂ ಸ್ಪಷ್ಟತೆ ಬೇಕಿದ್ರೆ ಶಿವಣ್ಣ ಅಭಿನಯದ ಅಸುರ ಚಿತ್ರ ನೆನಪು ಮಾಡಿಕೊಳ್ಳಿ. ಆ ಚಿತ್ರದಲ್ಲಿ ಮಹಾ ಗಣಪತಿ ಹಾಡಿನ ಕೊರಿಯೋಗ್ರಾಫರ್ ರಾಘವ ಲಾರೆನ್ಸ್. ಅಲ್ಲದೆ ಈ ಹಾಡಿನಲ್ಲಿ ಸ್ಪ್ರಿಂಗ್​ನಂತೆ ಮೈ ಬಳುಕಿಸಿ ಹೆಜ್ಜೆ ಹಾಕಿದ್ದರು.

ಇದೀಗ ಕಾಲಿವುಡ್-ಟಾಲಿವುಡ್-ಬಾಲಿವುಡ್​ನಲ್ಲಿ ತಮ್ಮ ವಿಭಿನ್ನ ಅಭಿನಯ ಹಾಗೂ ನಿರ್ದೇಶನದ ಮೂಲಕ ರಾಘವ ಲಾರೆನ್ಸ್ ಸಂಚಲನ ಸೃಷ್ಟಿಸಿದ್ದಾರೆ. ಹಾಗೆಯೇ ಅಕ್ಷಯ್ ಕುಮಾರ್ ಅವರನ್ನು ನಾಯಕರನ್ನಾಗಿಸಿ ಲಕ್ಷ್ಮಿ ಬಾಂಬ್ ಎಂಬ ಹಿಂದಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅತ್ತ ಬಾಲಿವುಡ್​ನಲ್ಲಿ ನಿರ್ದೇಶನಕ್ಕೆ ಅವಕಾಶ ದೊರೆಯುತ್ತಿದ್ದಂತೆ ಇತ್ತ ರಾಘವ ಲಾರೆನ್ಸ್ ಅವರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತಿದೆ. ಆ ಚಿತ್ರದ ಹೆಸರು ಚಂದ್ರಮುಖಿ-2.

ಈ ಹಿಂದೆ ರಜನಿ ಕನ್ನಡದ ಆಪ್ತಮಿತ್ರ ಚಿತ್ರವನ್ನು ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಇದೀಗ ಅದರ ಮುಂದುವರೆದ ಭಾಗದ ಕಥೆಯೊಂದನ್ನು ಪಿ.ವಾಸು ಅವರು ಸಿದ್ಧಪಡಿಸಿದ್ದಾರೆ. ಅಲ್ಲದೆ ಸೂಪರ್ ಸ್ಟಾರ್ ಅವರಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಹೀಗಾಗಿಯೇ ಚಂದ್ರಮುಖಿ-2 ಚಿತ್ರದ ನಿರ್ಮಾಪಕರು ರಾಘವ ಲಾರೆನ್ಸ್​ಗೆ ಮುಂಗಡವಾಗಿ 3 ಕೋಟಿ ರೂ. ನೀಡಿದ್ದರು.