TRPಯಲ್ಲಿ ‘ಬಾಹುಬಲಿ’ಯನ್ನು ಹಿಂದಿಕ್ಕಿದ ಮಹೇಶ್ ಬಾಬು ‘ಸರಿಲೇರು ನೀಕೆವ್ವರು’
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ರಿಲೀಸ್ ಆಗಿ ತಿಂಗಳುಗಳೆ ಆಗಿವೆ. ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿರುವ ಸರಿಲೇರು ನೀಕೆವ್ವರು ಸಿನಿಮಾ ಈ ಮತ್ತೊಂದು ದಾಖಲೆ ನಿರ್ಮಿಸಿದೆ. ಹೌದು, ಟಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿರುವ ಸರಿಲೇರು ನೀಕೆವ್ವರು ಸಿನಿಮಾ ಟಿವಿ ಟಿ ಆರ್ ಪಿ ವಿಚಾರದಲ್ಲೂ ಮಹೇಶ್ ಬಾಬು ಕಿಂಗ್ ಆಗಿದ್ದಾರೆ.
ಇತ್ತೀಚಿಗೆ ಸರಿಲೇರು ನೀಕೆವ್ವರು ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಈಗಾಗಲೆ ದಾಖಲೆ ನಿರ್ಮಿಸಿರುವ ಮಹೇಶ್ ಬಾಬು ಸಿನಿಮಾ ಈಗ, ಈ ಹಿಂದೆ ಪ್ರಸಾರವಾದ ಎಲ್ಲಾ ಸಿನಿಮಾಗಳ ಟಿ ಆರ್ ಪಿಯನ್ನು ಬ್ರೇಕ್ ಮಾಡಿ ಮೊದಲ ಸ್ಥಾನ ಗೆಟ್ಟಿಸಿಕೊಂಡಿದೆ. ಮುಂದೆ ಓದಿ..
ಅತಿ ಹೆಚ್ಚು ಟಿ ಆರ್ ಪಿ ಪಡೆಯುವ ಜೊತೆಗೆ ಬಾಹುಬಲಿ ಸಿನಿಮಾದ ದಾಖಲೆಯನ್ನು ಪುಡಿ ಪುಡಿ ಮಾಡಿದೆ. ಬಾಹುಬಲಿ-2 ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳಾಗಿದ್ದು, ಈ ಮೂರು ವರ್ಷಗಳಲ್ಲಿಯೂ ಬಾಹುಬಲಿ ಟಿ ಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಸಾಕಷ್ಟು ದಾಖಲೆಗಳನ್ನು ನಿರ್ಮಿಸಿರುವ ಬಾಹುಬಲಿ ಟಿ ಆರ್ ಪಿಯಲ್ಲೂ ಕಿಂಗ್ ಆಗಿತ್ತು. ಆದರೀಗ ಮಹೇಶ್ ಬಾಬು ಸಿನಿಮಾ ಪ್ರಭಾಸ್ ದಾಖಲೆಯನ್ನು ಮುರಿದು ಹಾಕಿದೆ.
ಇತ್ತೀಚಿಗೆ ಟಿವಿಯಲ್ಲಿ ಪ್ರಸಾರವಾದ ಸರಿಲೇರು ನೀಕೆವ್ವರು ಸಿನಿಮಾ 23.4 ಟಿ ಆರ್ ಪಿ ಪಡೆದಿದೆ. ಅಂದ್ಹಾಗೆ ಇದುವರೆಗೂ ಮೊದಲ ಸ್ಥಾನದಲ್ಲಿದ್ದ ಬಾಹುಬಲಿ 22.7 ಟಿ ಆರ್ ಪಿ ಪಡೆದಿತ್ತು. ಒಂದು ಪಾಯಿಂಟ್ ಅಂತರದಲ್ಲಿ ಈಗ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಮೊದಲ ಸ್ಥಾನದಲ್ಲಿದೆ.