EBM News Kannada
Leading News Portal in Kannada

ನಿಕ್ ಜೋನಾಸ್ ಜೊತೆ ಪ್ರಿಯಾಂಕ ಚೋಪ್ರಾ ಡೇಟಿಂಗ್?

ನ್ಯೂಜೆರ್ಸಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಿಯಾಂಕಾ ಚೋಪ್ರಾ ಕೆಲವು ದಿನಗಳಿಂದ ಅಮೆರಿಕದಲ್ಲೇ ವಾಸಿಸುತ್ತಿದ್ದು, ಈಗ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಈ ಇಬ್ಬರು ತಮ್ಮ ರಿಲೇಷನ್ ಶಿಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅಮೆರಿಕದಲ್ಲಿ ಇವರಿಬ್ಬರು ಜೊತೆಯಲ್ಲಿ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

ಪ್ರಿಯಾಂಕಾ ತನ್ನ ಗೆಳೆಯ ನಿಕ್ ಜೀನಸ್ ಜೊತೆ ಪಾರ್ಟಿ, ರೆಸ್ಟೋರೆಂಟ್ ಗಳಿಗೆ ಒಟ್ಟಿಗೆ ತಿರುಗಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೇ ಜೊತೆಯಲ್ಲಿ ಒಬ್ಬರಿಗೊಬ್ಬರು ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರಿಯಾಂಕಾ ಚೋಪ್ರಾಗೆ 35 ವರ್ಷಗಳಾಗಿದ್ದು, ಜೋನಸ್ 25 ವರ್ಷದ ಗಾಯಕ. ತಮಗಿಂತ 10 ವರ್ಷ ಚಿಕ್ಕ ವಯಸ್ಸಿನ ಯುವಕನ ಜೊತೆ ಪ್ರಿಯಾಂಕಾ ಓಡಾಡುತ್ತಿರುವುದು ಹಾಗೂ ಡೇಟಿಂಗ್ ನಡೆಸುತ್ತಿರುವುದರ ಬಗ್ಗೆ ಹಲವಾರು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಜೋನಸ್ ಸಂಬಂಧಿ ಮದುವೆಗೂ ಸಹ ಹಾಜರಾಗಿದ್ದರು.
2017 ರಲ್ಲಿ ನ್ಯೂಯಾರ್ಕ್ ನ ಗಾಲಾದಲ್ಲಿ ಭೇಟಿಯಾದ ಬಳಿದ ಅವರು ಡೇಟಿಂಗ್ ಆರಂಭಿಸಿದ್ದಾರೆ. ಮೇ 26 ರಂದು ನಡೆದ ದೊಡ್ಜರ್ಸ್ ಬೇಸ್ ಬಾಲ್ ಗೇಮ್ ಗೆ ಆಗಮಿಸಿದ್ದ ಅವರು ಪರಸ್ಪರ ಕೈ ಕೈ ಹಿಡಿದು ಸುತ್ತಾಡಿದರು.

ಗಾಲಾದಲ್ಲಿ ಭೇಟಿ ಮಾಡಿದ ಪ್ರಿಯಾಂಕಾ ಜೋನಸ್ ನೋಡಿ ನಕ್ಕಿದ್ದಾಳೆ, ಅಂದಿನಿಂದ ಇಬ್ಬರು ಸ್ನೇಹಿತರಾಗಿ ಜೊತೆಯಾಗಿ ಸುತ್ತುತ್ತಿದ್ದಾರೆ.