EBM News Kannada
Leading News Portal in Kannada

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ…

ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದೆ. ಇದೇ ಕಾರಣಕ್ಕೆ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು 7 ಸೀಟರ್ ಎಂಪಿವಿ ಕಾರುಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇನ್ನು ಕೆಲವು ಸಂಸ್ಥೆಗಳು ಸದ್ಯ ಲಭ್ಯವಿರುವ ಎಂಪಿವಿ ಕಾರುಗಳನ್ನೇ ಮತ್ತಷ್ಟು ಹೊಸತನದೊಂದಿಗೆ ಮರು ಬಿಡುಗಡೆಗಾಗಿ ಸಕಲ ಸಿದ್ಧತೆನಡೆಸಿವೆ.

ಎಂಪಿವಿ ಕಾರುಗಳು ಮುಖ್ಯವಾಗಿ ವ್ಯಯಕ್ತಿಕ ಬಳಕೆಗಿಂತ ಟೂರಿಸ್ಟ್ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಟೊಯೊಟಾ ಇನೋವಾ ಕಾರುಗಳು ಈ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿರುವುದು ಬಹುತೇಕ ವಾಹನ ಪ್ರಿಯರಿಗೆ ಗೊತ್ತಿರುವ ವಿಚಾರ. ಇದೇ ಕಾರಣಕ್ಕೆ ಮಾರುತಿ ಸುಜುಕಿ, ಮಹೀಂದ್ರಾ ಮತ್ತು ರೆನಾಲ್ಟ್ ಸಂಸ್ಥೆಗಳು ಸಹ ಹೊಸ ಎಂಪಿವಿ ಕಾರುಗಳನ್ನು ಬಿಡುಗಡೆಗೊಳಿಸಿ ಇನೋವಾಗೆ ಪ್ರತಿಸ್ಪರ್ಧಿಯಾಗುವ ತವಕದಲ್ಲಿವೆ.

ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ದೇಶಿಯ ಮಾರುಕಟ್ಟೆಯ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಸದ್ಯ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳಿಲಿದ್ದು, ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದೆ.

ಸದ್ಯ ಇಂಡೋನೇಷ್ಯಾ ಅಂತಾರಾಷ್ಟ್ರೀಯ ಮೋಟಾರ್ ಮೇಳದಲ್ಲಿ ಪ್ರದರ್ಶನಗೊಂಡಿರುವ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಆವೃತ್ತಿಗಳು ಎಂಪಿವಿ ಕಾರು ಪ್ರಿಯರನ್ನು ತನ್ನತ್ತ ಸೆಳೆಯುತ್ತಿದ್ದು, ಈ ಹಿಂದಿನ ಕಾರು ಮಾದರಿಗಿಂತ ಸಾಕಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ. ಈ ಹಿಂದಿನ ಮಾದರಿಗಿಂತ ಉದ್ದಳತೆಯಲ್ಲಿ ಹೆಚ್ಚಿನ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಎರ್ಟಿಗಾ ಫೇಸ್‌ಲಿಫ್ಟ್ ಕಾರುಗಳ ಕ್ಯಾಬಿನ್ ಸ್ಪೆಸ್ ಕೂಡಾ ಮೂಲ ಮಾದರಿಗಿಂತ ಹೆಚ್ಚಿರಲಿವೆ ಎನ್ನಲಾಗಿದೆ.

ಜೊತೆಗೆ ಕಾರಿನ ವಿಂಡ್‌ಸ್ಕ್ರೀನ್ ಅಳತೆಯಲ್ಲೂ ಬದಲಾವಣೆ ತರಲಾಗಿದ್ದು, ಹೊಸ ವಿನ್ಯಾಸದ ಅಲಾಯ್ ಚಕ್ರಗಳು ಮತ್ತು ಗುರುತರ ಬಾಡಿ ವಿನ್ಯಾಸಗಳು ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರಿನ ಲುಕ್ ಹೆಚ್ಚಿಸಿವೆ. ಸದ್ಯ ಎರ್ಟಿಗಾ ಮಾದರಿಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, ಎರ್ಟಿಗಾ ಫೇಸ್‌ಲಿಫ್ಟ್ ಮಾದರಿಗಳು ಹೊಸದಾಗಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಪಡೆಯಲಿವೆ.

ಸುರಕ್ಷಾ ಸೌಲಭ್ಯಗಳು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.