EBM News Kannada
Leading News Portal in Kannada

ಸಿಂಗಾಪುರ ಐತಿಹಾಸಿಕ ಶೃಂಗಸಭೆ: ಹೊಸ ಎಮೋಜಿ ಬಿಡುಗಡೆ ಮಾಡಿದ ಟ್ವಿಟರ್

ಸಿಂಗಾಪುರ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ನಡುವಿನ ಐತಿಹಾಸಿಕ ಮಹತ್ವದ ಶೃಂಗಸಭೆ ಹಿನ್ನೆಲೆಯಲ್ಲಿ ಟ್ವಿಟರ್ ಹೊಸ ಎಮೋಜಿ ಬಿಡುಗಡೆ ಮಾಡಿದೆ.

ಇದೊಂದು ಹೈ ಪೈ ಅಥವಾ ಪ್ರಾರ್ಥನೆಯ ಎಮೋಜಿಯಾಗಿದ್ದು, ಟ್ವಿಟರ್ ತನ್ನ ಬಳಕೆದಾರರಿಗೆ ವ್ಯಾಖ್ಯಾನವನ್ನು ಬಿಟ್ಟಿದೆ, ಅದು ಕಾಣುತ್ತದೆ.

ಸಿಂಗಾಪುರದಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ನಡುವಿನ ಐತಿಹಾಸಿಕ ಶೃಂಗಸಭೆಗಾಗಿ ಸಾಮಾಜಿಕ ಜಾಲತಾಣಗಳು ವಿವಿಧ ಪ್ರಕಾರದ ಹ್ಯಾಸ್ ಟಾಗ್ ಬಿಡುಗಡೆ ಮಾಡಿವೆ.

ಉಭಯ ದೇಶಗಳ ನಾಯಕರು ಇಂದು ಸೆಂತೊಸ ದ್ವಿಪ ಪ್ರದೇಶದ ಕಾಪೆಲ್ಲಾ ಹೊಟೆೇಲ್ ನಲ್ಲಿ ಮಾತುಕತೆ ನಡೆಸಲಿದ್ದಾರೆ.